ಹಳೆಯ ಒಡಂಬಡಿಕೆKNCL

ಕೀರ್ತನೆಗಳು 82

1ಸ್ವರ್ಗಸಭೆಯಲಿ ದೇವ ಅಗ್ರಸ್ಥಾನ ವಹಿಸಿಹನು I ದೇವರುಗಳ ಸಮೂಹದಲಿ ನ್ಯಾಯವಿಚಾರಿಸುತಿಹನು II

2“ಎಲ್ಲಿಯತನಕ ನೀಡುವಿರಿ ಅನ್ಯಾಯವಾದ ತೀರ್ಪನು? I ಎಲ್ಲಿಯವರೆಗೆ ತೋರುವಿರಿ ದುಷ್ಟರಿಗೆ ಪಕ್ಷಪಾತವನು? II

3ಅಬಲರಿಗೆ, ಅನಾಥರಿಗೆ ದೊರಕಿಸಿರಿ ನ್ಯಾಯವನು I ಕಾದಿರಿಸಿರಿ ದೀನದಲಿತರ ಹಕ್ಕು ಬಾಧ್ಯತೆಯನು II

4ಬಿಡುಗಡೆಮಾಡಿರಿ ದೀನ ಬಡಬಗ್ಗರನು I ದುರುಳರ ಕೈಯಿಂದ ರಕ್ಷಿಸಿರಿ ಅವರನು II

5ಬುದ್ಧಿಹೀನರು, ಮಂದಮತಿಗಳು, ಕತ್ತಲಲಿ ನಡೆವವರು ನೀವು I ಇದರಿಂದಲೆ ಕದಲುತ್ತಿರುವುವು ಧರೆಯ ಅಸ್ತಿವಾರಗಳು II

6‘ನೀವು ದೇವರುಗಳು’, ‘ನೀವೆಲ್ಲರು ಪರಾತ್ಪರನ ಮಕ್ಕಳು’ ನಾನೆಂದೆ I ಆದರೂ ಅಳಿಯುವಿರಿ ಅರಸರಂತೆ, ಸಾಯುವಿರಿ ಬರಿ ಮಾನವರಂತೆ” II

8ಎದ್ದೇಳು ದೇವ, ಸ್ಥಾಪಿಸು ನ್ಯಾಯವನು ಧರೆಯೊಳು I ನಿನ್ನ ಸೊತ್ತಾಗಿವೆಯಲ್ಲವೆ ಸಮಸ್ತ ರಾಷ್ಟ್ರಗಳು II