ಹಳೆಯ ಒಡಂಬಡಿಕೆKNCL
1ಹರಸು ದೇವಾ, ನಮ್ಮನಾಶೀರ್ವದಿಸು I ನಿನ್ನ ಮುಖಕಾಂತಿಯಿಂದೆಮ್ಮನು ಬೆಳಗಿಸು II
2ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ I ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲ II
3ನಿನ್ನ ಕೀರ್ತಿಸಲಿ ದೇವಾ, ಜನರು I ಸಂಕೀರ್ತಿಸಲಿ ಅವರೆಲ್ಲರೂ II
4ನ್ಯಾಯದ ಪ್ರಕಾರ ತೀರ್ಪಿಡುತಿ ಜನತೆಗೆ I ಆದರ್ಶನೀಡುತಿ ಜಗದ ರಾಷ್ಟ್ರಗಳಿಗೆ I ಹರ್ಷಾನಂದವಾಗಲಿ ಜನಾಂಗಗಳಿಗೆ II
5ನಿನ್ನ ಕೀರ್ತಿಸಲಿ ದೇವಾ, ಜನರು I ಸಂಕೀರ್ತಿಸಲಿ ಅವರೆಲ್ಲರೂ II
6ಇತ್ತನೆಮ್ಮ ದೇವನು ಆಶೀರ್ವಾದವನು I ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು II
7ನಮ್ಮೆಲ್ಲರನು ದೇವನು ಹರಸಲಿ I ಎಲ್ಲೆಡೆ ಆತನ ಭಯಭಕ್ತಿಯಿರಲಿ II