ಹಳೆಯ ಒಡಂಬಡಿಕೆKNCL

ಕೀರ್ತನೆಗಳು 149

1ಅಲ್ಲೆಲೂಯ! ಹಾಡಿರಿ ಪ್ರಭುವಿಗೆ ನೂತನ ಕೀರ್ತನೆಯನು I ಭಕ್ತರ ಸಭೆಯಲಿ ಸ್ತುತಿಮಾಡಿರಿ ಆತನನು II

2ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ ಇಸ್ರಯೇಲರು I ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು II

3ಆತನ ನಾಮವನು ಕೀರ್ತಿಸಲಿ ಕುಣಿತದಿಂದ I ಆತನನು ಭಜಿಸಲಿ ತಮಟೆ, ಕಿನ್ನರಿಗಳಿಂದ II

4ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು I ಜಯಶೀಲರನ್ನಾಗಿಸುತ್ತಾನೆ ದೀನದಲಿತರನು II

5ಹಿಗ್ಗಲಿ ಭಕ್ತಾದಿಗಳು ದೊರೆತ ವಿಜಯದಲಿ I ಜಯಕಾರ ಮಾಡಲಿ ತಮ್ಮ ತಮ್ಮ ಶಿಬಿರಗಳಲಿ II

6ಇರಲಿ ಪ್ರಭುವಿನ ಸ್ತೋತ್ರ ಅವರ ಬಾಯಲಿ I ಇರಲಿ ಇಬ್ಬಾಯಿ ಕತ್ತಿಯು ಅವರ ಕೈಯಲಿ II

7ಈ ಪರಿ ಮುಯ್ಯಿತೀರಿಸಲಿ ಜನಾಂಗಗಳಿಗೆ I ವಿಧಿಸಲಿ ದಂಡನೆಯನು ಅನ್ಯರಾಷ್ಟ್ರಗಳಿಗೆ II

8ಬಂದಿಸಲಿ ಅವರ ರಾಜರನು ಸಂಕೋಲೆಯಿಂದ I ಅವರ ಅಧಿಕಾರಿಗಳನು ಕಬ್ಬಿಣದ ಬೇಡಿಗಳಿಂದ II

9ವಿಧಿಸಲಿ ಅವರಿಗೆ ಲಿಖಿತಾಜ್ಞೆಯ ಶಿಕ್ಷೆಯನು I ಇದು ತರಲಿ ಭಕ್ತರೆಲ್ಲರಿಗೆ ಗೌರವವನು I ಅಲ್ಲೆಲೂಯ! II