ಹಳೆಯ ಒಡಂಬಡಿಕೆKNCL

ಕೀರ್ತನೆಗಳು 142

1ಮೊರೆಯಿಡುವೆನು ನಾನು ಪ್ರಭುವಿಗೆ I ಸ್ವರವೆತ್ತಿ ಬೇಡುವೆನು ಆತನಿಗೆ II

2ಬಿಚ್ಚುವೆನು ಆತನ ಮುಂದೆ ಚಿಂತೆಯ ಕಟ್ಟನು I ಅರಿಕೆ ಮಾಡುವೆನು ನನ್ನ ಕಷ್ಟ ಸಂಕಟವನು II

3ಉರುಲೊಡ್ಡಿಹರು ನಾ ನಡೆಯುವ ಮಾರ್ಗದಲೆ I ನಾ ಮನಗುಂದಿರೆ, ಪರಿಹಾರವನು ನೀ ಬಲ್ಲೆ II

4ಅಕ್ಕಪಕ್ಕದಲಿ ಸಹಾಯಕರಾರೂ ಇಲ್ಲ I ಆಶ್ರಯರಹಿತ, ಹಿತಚಿಂತಕರಾರೂ ನನಗಿಲ್ಲ II

5ಪ್ರಭುವೇ, ನನಗಾಶ್ರಯ ನೀನೇ I ನನ್ನ ಬಾಳಿನ ಸೊತ್ತು ನೀನೇ I ಕೂಗಿ ನಿನಗೆ ಮೊರೆಯಿಡುತ್ತೇನೆ II

6ಕುಗ್ಗಿ ಹೋಗಿರುವೆ, ನನ್ನ ಕೂಗಿಗೆ ಪ್ರಭು ಕಿವಿಗೊಡು I ಬಲಿಷ್ಠ ಹಿಂಸಾತ್ಮಕರಿಂದ ನನ್ನನು ಪಾರುಮಾಡು II

7ಬಿಡಿಸು ಸೆರೆಯಿಂದೆನ್ನನು, ಭಜಿಸುವೆನು ನಿನ್ನ ನಾಮವನು I ಸಜ್ಜನರ ಸಭೆಯಲಿ ಕೊಂಡಾಡುವೆನು ನಿನ್ನ ಉಪಕಾರವನು II