ಹಳೆಯ ಒಡಂಬಡಿಕೆKNCL
1(ಯಾತ್ರಾಗೀತೆ) ಭಜಿಸಿರಿ ಪ್ರಭುವನು ಆತನ ಸಕಲ ಸೇವಕರೇ I ಆತನ ಮಂದಿರದಲಿ ರಾತ್ರಿ ಕಾವಲಿರುವವರೇ II
2ಭಜಿಸಿರಿ ಪ್ರಭುವನು ಕರಗಳನೆತ್ತಿ I ಪವಿತ್ರಾಲಯದಲಿ ಕೈಗಳನೆತ್ತಿ II
3ಹರಸಲಿ ಸಿಯೋನಿನಿಂದ ನಿಮ್ಮನು I ಭೂಮ್ಯಾಕಾಶಗಳ ಸೃಜಿಸಿದಾತನು II