ಹಳೆಯ ಒಡಂಬಡಿಕೆKNCL
1(ಯಾತ್ರಾಗೀತೆ) ಪ್ರಭುವಿನಲಿ ನಂಬಿಕೆ ನಿರೀಕ್ಷೆಯಿಂದಿರುವವರು I ನಿಶ್ಚಲ, ಸುಸ್ಥಿರ, ಗಿರಿ ಸಿಯೋನಿನಂತೆ ಇರುವರು II
2ಪರ್ವತಗಳಿರುವಂತೆ ಜೆರುಸಲೇಮಿನ ಸುತ್ತಮುತ್ತಲು I ಇಹನು ಪ್ರಭು ಇಂದಿಗೂ ಎಂದಿಗೂ ತನ್ನ ಜನರ ಸುತ್ತಲು II
3ಸಜ್ಜನರ ನಾಡಿನಲಿ ಉಳಿಯದು ದುರ್ಜನರ ದಬ್ಬಾಳಿಕೆ I ಉಳಿಯಿತಾದರೆ ಸಜ್ಜನರೂ ಕೈಹಚ್ಚಬಹುದು ಅಕ್ರಮಕೆ II
4ಒಳಿತನು ಮಾಡು ಪ್ರಭು, ಒಳ್ಳೆಯವರಿಗೆ I ಒಳ್ಳೆಯವರಿಗೆ ಮೇಣ್ ನೇರ ಮನಸ್ಕರಿಗೆ II
5ಅಕ್ರಮಿಗಳ ದುರ್ಗತಿ ದುರ್ಮಾರ್ಗಿಗಳಿಗೆ I ಶುಭವಾಗಲಿ ಪ್ರಭೂ, ಇಸ್ರಯೇಲರಿಗೆ II