ಹಳೆಯ ಒಡಂಬಡಿಕೆKNCL
1(ಯಾತ್ರಾಗೀತೆ) ಕಣ್ಣೆತ್ತಿ ನಾ ನೋಡುವೆ ಪರ್ವತದತ್ತ I ಕೇಳುವೆ : “ನನಗೆ ಒತ್ತಾಸೆ ಎತ್ತಣಿಂದ?” II
2ನನಗೆ ಒತ್ತಾಸೆ ಪ್ರಭುವಿನಿಂದ I ಭೂಮ್ಯಾಕಾಶ ಸೃಜಿಸಿದವನಿಂದ II
3ನಿನ್ನ ಕಾಲೆಡವದಂತೆ ನೋಡುವನಾತ I ತೂಕಡಿಸಲಾರನು ನಿನ್ನ ಕಾಯುವಾತ II
4ಇಗೋ, ಇಸ್ರಯೇಲನು ಕಾಯುವಾತನು I ನಿದ್ರಿಸಲಾರನು, ತೂಕಡಿಸಲಾರನು II
5ನಿನ್ನನು ಕಾಯುತಿಹನು ಪ್ರಭುವೇ I ಬಲಗಡೆ ನೆರಳಂತಿಹನು ವಿಭುವೇ II
6ನಿನ್ನ ಬಾಧಿಸನು ಸೂರ್ಯನು ಹಗಲೊಳು I ನಿನ್ನ ಪೀಡಿಸನು ಚಂದ್ರನು ಇರುಳೊಳು II
7ಪ್ರಭು ಕಾಯುವನು ನಿನ್ನ ಪ್ರಾಣವನು I ಸಕಲ ಕೇಡಿನಿಂದ ಕಾಪಾಡುವನು II
8ಪ್ರಭು ಕಾಯುವನು ನಿನ್ನ ಆಗುಹೋಗುಗಳನು I ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು II