ಹಳೆಯ ಒಡಂಬಡಿಕೆKNCL
1(ಯಾತ್ರಾಗೀತೆ) ಸಂಕಟದಲಿ ಮೊರೆಯಿಟ್ಟೆನು ಪ್ರಭುವಿಗೆ I ಕೊಟ್ಟನು ಸದುತ್ತರವನು ಆತನೆನಗೆ II
2ಬಿಡಿಸೆನ್ನನು ಪ್ರಭು ಸುಳ್ಳುಬಾಯಿಂದ I ವಂಚಿಸುವ ನಾಲಿಗೆ ಉಳ್ಳವರಿಂದ II
3ವಂಚಕ ನಾಲಿಗೆಯೆ, ನಿನಗೆ ಸಿಕ್ಕುವುದೇನು? I ನಿನಗೆ ಬಂದೊದಗುವ ಶಿಕ್ಷೆಯಾದರೂ ಏನು? II
4ತಟ್ಟುವುವು ಶೂರನ ಹರಿತ ಬಾಣಗಳು I ಗಿಟ್ಟುವುವು ಉರಿಯುವ ಬೆಂಕಿ ಕೆಂಡಗಳು II
5ಅಯ್ಯೋ ತಂಗಬೇಕಲ್ಲಾ ಮೇಷೆಕಿನವರ ಮಧ್ಯದಲಿ II ಅಕಟಾ ಇರಬೇಕಲ್ಲಾ ಕೇದಾರಿನ ಪಾಳೆಯಗಳಲಿ II
6ಶಾಂತಿಗೆ ಶತ್ರುಗಳಾದವರ ಒಡನಾಟ I ಸಾಕು ಆ ದೀರ್ಘ ಬಾಳಿನ ಸಂಕಟ II
7ಶಾಂತಿಪರ ಮಾತು ನನ್ನದು I ಸಮರದ ಕಾತರ ಅವರದು II