ಹಳೆಯ ಒಡಂಬಡಿಕೆKNCL

ಕೀರ್ತನೆಗಳು 110

1ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ I “ಆಸೀನನಾಗಿರು ನೀನು ನನ್ನ ಬಲಗಡೆಗೆ I ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ” II

2ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು I ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು II

3ಸೇನೆಯನು ನೀ ಅಣಿಗೊಳಿಸುವ ದಿನದೊಳು I ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು I ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು I ಉದಯಕಾಲದಿಬ್ಬನಿಯಂತೆ ಇಳಿದು ಬರುವರು II

4“ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ” I ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ ಮಾತ II

5ಬೆಂಬಲವಾಗಿ ನಿಂತಿಹನು ಪ್ರಭು ನಿನ್ನ ಹತ್ತಿರದಲೆ I ಸದೆಬಡಿವನು ಅರಸರನು ತನ್ನ ಪ್ರಕೋಪ ದಿನದಲೆ II

6ನ್ಯಾಯತೀರಿಸುವನು ಪ್ರಭು ಸಕಲ ಜನಾಂಗಗಳಲಿ I ಛೇಧಿಸುವನು ಶತ್ರುಗಳ ಶಿರಸನು ರಣರಂಗದಲಿ I ತುಂಬಿಸುವನು ಹೆಣಗಳನು ಎಲ್ಲೆಡೆಗಳಲಿ II

7ತೊರೆಯ ನೀರನು ಕುಡಿವನಾ ಒಡೆಯ I ತಲೆಯೆತ್ತಿ ನಡೆವನು ಗಳಿಸಿ ವಿಜಯ II