ಹಳೆಯ ಒಡಂಬಡಿಕೆKNCL

ಸಂಖ್ಯಾಕಾಂಡ 34

1ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದ್ದು ಏನೆಂದರೆ:

2“ನೀನು ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು - ‘ಇಡೀ ಕಾನಾನ್ ನಾಡು ನಿಮಗೆ ಸ್ವಂತ ನಾಡಾಗಿ ದೊರಕುವುದು.

3ನೀವು ಅಲ್ಲಿ ಸೇರಿದಾಗ ಎದೋಮ್ಯರ ಸರಹದ್ದಿನ ಬಳಿಯಿರುವ ಚಿನ್ ಮರುಭೂಮಿಯೇ ನಿಮ್ಮ ದಕ್ಷಿಣ ಮೇರೆಯಾಗಿರಬೇಕು. ಆ ಮೇರೆ ಮೂಡಣ ದಿಕ್ಕಿನಲ್ಲಿ ಲವಣಸಮುದ್ರದ ಕೊನೆಯಿಂದ ತೊಡಗುವುದು.

4ಅದು ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರುವುದು. ಅದರ ಮೂಲೆ ಕಾದೇಶ್ ಬರ್ನೆಯದ ದಕ್ಷಿಣ ಕಡೆಯಲ್ಲಿರುವುದು. ಅಲ್ಲಿಂದ ಹಚರದ್ದಾರ್, ಆಚ್ಮೋನ್ ಎಂಬ ಊರುಗಳ ಮೇಲೆ

5ಈಜಿಪ್ಟ್ ದೇಶದ ಮುಂದೆ ಇರುವ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯುವುದು.

6‘ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ನಾಡಿನ ಮೇರೆಯಾಗಿರುವುದು.

7‘ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ ಹೋರ್ ಎಂಬ ಪರ್ವತಕ್ಕೂ

8ಆ ಪರ್ವತದಿಂದ ಹಮಾತಿನ ದಾರಿಗೂ ಗುರುತು ಹಾಕಿಕೊಳ್ಳಬೇಕು. ಅದರ ಮೂಲೆ ಚೆದಾದಿನ ಹತ್ತಿರ ಇರುವುದು.

9ಆಮೇಲೆ ಅದು ಜಿಫ್ರೋನಿಗೆ ಹೋಗಿ ಹಚೆರೇನಾನಿನ ಬಳಿಯಲ್ಲಿ ಮುಗಿಯುವುದು.

10‘ಪೂರ್ವದಿಕ್ಕಿನ ಮೇರೆಗಾಗಿ ಹಚೆರೇನಾನಿನಿ0ದ ಶೆಫಾಮಿಗೆ ಗುರುತು ಹಾಕಬೇಕು.

11ಅಲ್ಲಿ0ದ ಅದು ಅಯಿನಿನ ಮೂಡಲಲ್ಲಿರುವ ರಿಬ್ಲಕ್ಕೆ ಬರಬೇಕು.ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್‍ ಸಮುದ್ರದ ಮೂಡಲಲ್ಲಿರುವ ಬೆಟ್ಟಗಳಿಗೆ ಹೋಗಬೇಕು.

12ಅದೂ ಅಲ್ಲಿಂದ ಜೋರ್ಡನ್ ನದಿಗೆ ಇಳಿದು, ಅದನ್ನು ಅನುಸರಿಸುತ್ತಾ ಲವಣ ಸಮುದ್ರದ ಬಳಿಯಲ್ಲಿ ಮುಗಿಯಬೇಕು.’ ಇವೇ ನಿಮ್ಮ ನಾಡಿನ ಮೇರೆಗಳು,” ಎಂದರು.

13ಅದಕ್ಕನುಸಾರವಾಗಿ ಮೋಶೆ ಇಸ್ರಯೇಲರಿಗೆ, “ನೀವು ಚೀಟುಹಾಕಿ ಹಂಚಿಕೊಳ್ಳಬೇಕೆಂದು ಸರ್ವೇಶ್ವರ ಆಜ್ಞಾಪಿಸಿದ ನಾಡು ಇದೇ. ಒಂಬತ್ತುವರೆ ಕುಲದವರಿಗೆ ಇದನ್ನು ಹಂಚಿಕೊಡಬೇಕು.

14ಬೇರೆ ಎರಡುವರೆ ಕುಲಗಳವರು, ಅಂದರೆ ರೂಬೇನ್ಯರ ಕುಟುಂಬಗಳು, ಗಾದ್ಯರ ಕುಟುಂಬಗಳು ಹಾಗು ಮನಸ್ಸೆಕುಲದವರಲ್ಲಿ ಅರ್ಧಜನರು ಜೋರ್ಡನ್ ನದಿಯ ಈಚೆ ಜೆರಿಕೊ ಪಟ್ಟಣಕ್ಕೆ ಪೂರ್ವದಿಕ್ಕಿನಲ್ಲಿ ಸೊತ್ತನ್ನು ಹೊಂದಿದ್ದಾರೆ,” ಎಂದು ಅಪ್ಪಣೆಕೊಟ್ಟನು.

16ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದು ಏನೆಂದರೆ:

17“ಮಹಾಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವನು

18ಹಾಗು ಒಂದೊಂದು ಕುಲದಿಂದ ನೇಮಿಸಲ್ಪಟ್ಟ ಒಬ್ಬ ಕುಲನಾಯಕನು ಇವರೇ ಕಾನಾನ್‍ ನಾಡಿನಲ್ಲಿ ನಿಮ್ಮ ನಿಮ್ಮ ಸೊತ್ತುಗಳನ್ನು ಹಂಚಿಕೊಡಬೇಕಾದವರು.

19ಆಯಾ ಕುಲದಿಂದ ನೀವು ನೇಮಿಸಬೇಕಾದವರು ಇವರು: ಯೆಹೂದ ಕುಲದಿಂದ ಯೆಫುನ್ನೆಯ ಮಗ ಕಾಲೇಬ್,

20ಸಿಮೆಯೋನ್ ಕುಲದಿಂದ ಅಮ್ಮೀಹೂದನ ಮಗ ಶೆಮೂವೇಲ್,

21ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗ ಎಲೀದಾದ್,

22ದಾನ್ ಕುಲದಿಂದ ಯೊಗ್ಲೀಯ ಮಗ ಬುಕ್ಕೀ ನಾಯಕ,

23ಜೋಸೆಫನ ವಂಶದವರಲ್ಲಿ ಮನಸ್ಸೆ ಕುಲದಿಂದ ಏಫೋದನ ಮಗ ಹನ್ನೀಯೇಲ್ ನಾಯಕ,

24ಎಫ್ರಯಿಮ್ ಕುಲದಿಂದ ಶಿಫ್ಟಾನನ ಮಗ ಕೆಮೂವೇಲ್ ನಾಯಕ,

25ಜೆಬುಲೂನ್ ಕುಲದಿಂದ ಪರ್ನಾಕನ ಮಗ ಎಲೀಚಾಫನ್ ನಾಯಕ,

26ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗ ಪಲ್ಟಿಯೇಲ್ ನಾಯಕ,

27ಆಶೇರ್ ಕುಲದಿಂದ ಶೆಲೋಮಿಯ ಮಗ ಅಹೀಹೂದ್ ನಾಯಕ,

28ನಫ್ತಾಲಿ ಕುಲದಿಂದ ಅಮ್ಮೀಹೂದನ ಮಗ ಪೆದಹೇಲ್ ನಾಯಕ.”

29ಕಾನಾನ್ ನಾಡಿನಲ್ಲಿ ಇಸ್ರಯೇಲರಿಗೆ ಸೊತ್ತನ್ನು ಹಂಚಿಕೊಡುವುದಕ್ಕೆ ಸರ್ವೇಶ್ವರ ಇವರೆಲ್ಲರನ್ನು ನೇಮಿಸಿದರು.